Actor, former minister Ambarish will leave the Congress and the news is that he will join JDS. Especially in Mandya, they are saying that Ambarish will sure to join JDS.
ಅರ್ಜಿ ಸಲ್ಲಿಸದಿದ್ದರೂ ಚಿತ್ರನಟ, ಮಾಜಿ ಸಚಿವ ಎಂ.ಎಚ್. ಅಂಬರೀಷ್ ಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಹೀಗಿದ್ದೂ ಸ್ಪರ್ಧಿಸಲು ಅವರು ಮೀನಾಮೇಷ ಎಣಿಸುತ್ತಿದ್ದು ನಾಮಪತ್ರ ಸಲ್ಲಿಸಿಲ್ಲ, ಹಾಗೂ ಸಲ್ಲಿಕೆಗೂ ಮುಂದಾಗಿಲ್ಲ. ಸದ್ಯಕ್ಕೆ ಅವರು ಕಾಂಗ್ರೆಸ್ ಬಿಡಲಿದ್ದಾರೆ, ಜೆಡಿಎಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಅದರಲ್ಲೂ ಮುಖ್ಯವಾಗಿ ಮಂಡ್ಯದಲ್ಲಿ ಅವರು ಜೆಡಿಎಸ್ ಸೇರುವುದು ಖಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ.